Bengaluru, Sept. 25: The birth anniversary of Pandit Deendayal Upadhyaya was celebrated at Rashtrotthana Vidya Kendra – Banashankari. On this occasion, the 150th-anniversary celebration of the composition of the ‘Vande Mataram’ song was also observed.
- Students spoke about Pandit Deendayal Upadhyaya, describing him as a great Indian thinker, philosopher, and economist. They noted that he was born on September 25, 1916, in Dhanakiya village, Mathura district, Uttar Pradesh. They mentioned that he joined the RSS during his college days and later dedicated his life to the service of the nation as a full-time Pracharak (campaigner).
- As part of the 150th-anniversary celebration of the ‘Vande Mataram’ song, teachers provided a detailed explanation regarding the historical background, the composer, and the profound meaning of the song. The significance of ‘Vande Mataram’ as an expression of patriotism and devotion to the motherland was meaningfully highlighted.
ಬೆಂಗಳೂರು, ಸೆ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಪಂಡಿತ ದೀನ್ ದಯಾಳು ಉಪಾಧ್ಯಾಯರ ಜಯಂತಿಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ವಂದೆ ಮಾತರಂ ಗೀತೆಯ ರಚನೆಯ 150 ವರ್ಷಾಚರಣೆಯನ್ನೂ ಮಾಡಲಾಯಿತು.
- ವಿದ್ಯಾರ್ಥಿಗಳು ಪಂಡಿತ ದೀನ ದಯಾಳು ಉಪಾಧ್ಯಾಯರ ಬಗ್ಗೆ ಮಾತನಾಡಿ ಇವರು ಭಾರತದ ಒಬ್ಬ ಮಹಾನ್ ಚಿಂತಕ, ತತ್ತ್ವತ್ವಜ್ಞಾನಿ, ಅರ್ಥಶಾಸ್ತ್ರಜ್ಞ. ಇವರು 25 ಸೆಪ್ಟೆಂಬರ್ 1916ರಂದು ಉತ್ತರ ಪ್ರದೇಶದ ಮಧುರ ಜಿಲ್ಲೆಯ ಧನಕಿಯ ಗ್ರಾಮದಲ್ಲಿ ಜನಿಸಿದರು. ಇವರು ಕಾಲೇಜು ದಿನಗಳಲ್ಲಿ ಆರ್ಎಸ್ಎಸ್ ಸೇರಿದ್ದು, ನಂತರ ಪೂರ್ಣಾವಧಿ ಪ್ರಚಾರಕರಾಗಿ ದೇಶ ಸೇವೆಗೆ ಜೀವನ ಮುಡುಪಾಗಿಟ್ಟಿದ್ದರು ಎಂದು ತಿಳಿಸಿದರು.
- ‘ವಂದೇ ಮಾತರಂ’ ಗೀತೆಯ ರಚನೆಯ 150ನೇ ವರ್ಷದ ಆಚರಣೆಯಲ್ಲಿ ಭಾರತದ ರಾಷ್ಟ್ರಗೀತೆಯ ಐತಿಹಾಸಿಕ ಹಿನ್ನೆಲೆ, ರಚನೆಕಾರರು ಮತ್ತು ಅದರ ಆಳವಾದ ಅರ್ಥದ ಕುರಿತು ನಮ್ಮ ಶಿಕ್ಷಕರು ವಿವರವಾಗಿ ವಿವರಿಸಿದರು. ದೇಶಭಕ್ತಿ ಹಾಗೂ ಮಾತೃಭೂಮಿಯ ಮೇಲಿನ ಭಕ್ತಿಯ ಅಭಿವ್ಯಕ್ತಿಯಾಗಿ ‘ವಂದೇ ಮಾತರಂ’ ಗೀತೆಯ ಮಹತ್ವವನ್ನು ಅರ್ಥಪೂರ್ಣವಾಗಿ ಎತ್ತಿ ತೋರಿಸಲಾಯಿತು.





