Bengaluru, Aug 19: A symbol of brotherhood and harmony Rakshabandhan program was celebrated herein Rashtrotthana Vidya Kendra – Banashankari.The students shared the information that Rakshabandhan has cultural and social significance to strengthen the bond of siblings and social relations. Many legendary stories related to the celebration of the festival were shared.The messages of Rakshabandhan were conveyed. sang songs related to the festival; Children were entertained by dancing. Mataji tied the tilak and Rakshe to teaching and non-teaching staff. Students tied the ಋakshe to their classmates.Students visited the surrounding schools, hospitals, post office etc. and tied the Rakshe and gave the message of social brotherhood.
ಬೆಂಗಳೂರು, ಆಗಸ್ಟ್ 19: ಸಹೋದರತೆ ಹಾಗೂ ಸಾಮರಸ್ಯದ ಸಂಕೇತವಾದ ರಕ್ಷಾಬಂಧನ ಕಾರ್ಯಕ್ರಮವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಆಚರಿಸಲಾಯಿತು. ಒಡಹುಟ್ಟಿದವರ ಬಾಂಧವ್ಯವನ್ನು ಹಾಗೂ ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ರಕ್ಷಾಬಂಧನವು ಸಾಂಸ್ಕೃತಿಕ ಹಾಗೂ ಸಾಮಾಜಿಕ ಮಹತ್ತ್ವವನ್ನು ಹೊಂದಿದೆ ಎನ್ನುವ ಮಾಹಿತಿಯನ್ನು ವಿದ್ಯಾರ್ಥಿಗಳು ಹಂಚಿಕೊಂಡರು. ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಅನೇಕ ಪೌರಾಣಿಕ ಕಥೆಯನ್ನು ಹಂಚಿಕೊಂಡರು. ರಕ್ಷಾಬಂಧನದ ಸಂದೇಶಗಳನ್ನು ತಿಳಿಸಲಾಯಿತು.ಹಬ್ಬಕ್ಕೆ ಸಂಬಂಧಿಸಿದ ಹಾಡುಗಳನ್ನು ಹಾಡಿದರು; ಮಕ್ಕಳು ನೃತ್ಯದ ಮೂಲಕ ರಂಜಿಸಿದರು. ಮಾತಾಜಿಯವರು ಶಾಲೆಯ ಬೋಧಕ ಬೋಧಕೇತರ ವರ್ಗದವರಿಗೆ ತಿಲಕವಿಟ್ಟು ರಕ್ಷೆಯನ್ನು ಕಟ್ಟಿದರು. ವಿದ್ಯಾರ್ಥಿಗಳು ಸಹಪಾಠಿಗಳಿಗೆ ರಕ್ಷೆಯನ್ನು ಕಟ್ಟಿದರು. ವಿದ್ಯಾರ್ಥಿಗಳು ಸುತ್ತಮುತ್ತಲಿನ ಶಾಲೆಗಳು, ಆಸ್ಪತ್ರೆಗಳು, ಪೋಸ್ಟ್ ಆಫೀಸ್ ಮುಂತಾದ ಕಡೆ ಭೇಟಿ ನೀಡಿ ರಕ್ಷೆಯನ್ನು ಕಟ್ಟಿ ಸಾಮಾಜಿಕ ಭ್ರಾತೃತ್ವದ ಸಂದೇಶವನ್ನು ನೀಡಿದರು.