Bengaluru, Sep. 3: The Sri Krishna Janmashtami festival was celebrated with great enthusiasm at Rashtrotthana Vidya Kendra – Banashankari.
- Krishna was worshipped with fruits and flowers.
- During the worship, teachers and students sang Krishna bhajans.
- The children explained the importance of Sri Krishna Janmashtami celebrations.
- The children performed a group dance.
- Prasad was distributed to the children.
- A program of breaking yoghurt was organised in the school grounds in the evening.
- Ambika Ji performed a pooja to the yoghurt-drinking pillar and explained the importance of drinking yoghurt. Sri Krishna used to play such games of breaking yoghurt while grazing cows in Nandagokula. He said that the children of our school will break the yoghurt drink in the same way.
- The children of class X danced beautifully.
- Then they built a human tower and held a competition to break the yoghurt drink based on the channels.
- All the students did a mass dance on the ground with the teacher.
ಬೆಂಗಳೂರು, ಸೆ. 3: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.
- ಕೃಷ್ಣನಿಗೆ ಫಲ ಪುಷ್ಪಗಳ ನೈವೇದ್ಯದೊಂದಿಗೆ ಪೂಜೆಯನ್ನು ಮಾಡಲಾಯಿತು.
- ಪೂಜಾ ಸಮಯದಲ್ಲಿ ಕೃಷ್ಣನ ಭಜನೆಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಡಿದರು.
- ಮಕ್ಕಳು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಮಹತ್ವವನ್ನು ತಿಳಿಸಿದರು.
- ಮಕ್ಕಳು ಸಾಮೂಹಿಕ ನೃತ್ಯವನ್ನು ಮಾಡಿದರು.
- ಮಕ್ಕಳಿಗೆ ಪ್ರಸಾದವನ್ನು ವಿತರಿಸಲಾಯಿತು.
- ಸಂಜೆ ಶಾಲಾ ಮೈದಾನದಲ್ಲಿ ಮೊಸರು ಕುಡಿಕೆಗೆ ಹೊಡೆಯುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
- ಮೊಸರು ಕುಡುಕೆಯ ಕಂಬಕ್ಕೆ ಪೂಜೆಯನ್ನು ನೆರವೇರಿಸಿ ಮೊಸರು ಕುಡಿಕೆಯ ಮಹತ್ವವನ್ನು ಅಂಬಿಕಾ ಜಿ ತಿಳಿಸಿದರು. ಶ್ರೀ ಕೃಷ್ಣನು ನಂದಗೋಕುಲದಲ್ಲಿ ಗೋವುಗಳನ್ನು ಮೇಯಿಸುವಾಗ ಈ ರೀತಿಯ ಮೊಸರು ಕುಡಿಕೆ ಒಡೆಯುವ ಆಟಗಳನ್ನು ಆಡುತ್ತಿದ್ದನು. ಅದೇ ರೀತಿ ನಮ್ಮ ಶಾಲೆಯ ಮಕ್ಕಳು ಮೊಸರು ಕುಡಿಕೆಯನ್ನ ಒಡೆಯುವರು ಎಂದು ತಿಳಿಸಿದರು.
- ಹತ್ತನೇ ತರಗತಿಯ ಮಕ್ಕಳು ಸುಂದರವಾಗಿ ನೃತ್ಯ ಮಾಡಿದರು.
- ನಂತರ ಮಾನವ ಗೋಪುರವನ್ನು ನಿರ್ಮಿಸಿ ವಾಹಿನಿಗಳ ಆಧಾರದ ಮೇಲೆ ಮೊಸರು ಕುಡಿಕೆಯನ್ನು ಒಡೆಯುವ ಸ್ಪರ್ಧೆಯನ್ನು ನಡೆಸಿದರು.
- ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಕರೊಂದಿಗೆ ಮೈದಾನದಲ್ಲಿ ಸಾಮೂಹಿಕ ನೃತ್ಯವನ್ನು ಮಾಡಿದರು.














