Bengaluru, June 13: As part of World Environment Day and Yoga Day, the Rashtotthana Vidya Kendra – Banashankari Parivar team organised a walking jatha and cycle jatha program.
• The program was inaugurated by Traffic Inspector Ramachandrappa and Sub-Inspector Shekhar of Kengeri Police Station.
• The program started from Aditya Bakery.
• RVK students, NCC students, a group of staff, Matrubharatiya Matays, parents, and teachers were loudly chanting slogans about saving the environment in the jatha.
• In addition, paper bags and seed balls were distributed to the public.
It proceeded till Jayadev Memorial Rashtotthana Hospital and Research Centre, Rajarajeshwari Nagar.
• The chief guests were Dr Shaila H., Medical Administrator of Rashtrotthana Hospital, and Dr Vinith Mohan, who is working as the COO of Rashtrotthana Hospital, and inaugurated the program.
• The students performed an environmental song, a drama on the problems caused by cutting trees, and a yoga dance.
• The chief guest, Dr. Shaila H. N., Medical Administrator of Rajyothana Hospital, gave a message about environmental protection, saying that the environment is being damaged. We should stop using straws, control the use of plastic. Let’s plant more and more trees. Let’s dispose of garbage properly.
• Dr Vinith said that those who protect the environment, like soldiers, doctors, and teachers, are also very important to us. So, let’s all work together to protect the environment and encourage everyone.
• The students were congratulated for their wonderful performance and were awarded with a momento.
ಬೆಂಗಳೂರು, ಜೂ. 13: ವಿಶ್ವಪರಿಸರ ದಿನಾಚರಣೆ ಹಾಗೂ ಯೋಗ ದಿನಾಚರಣೆಯ ಅಂಗವಾಗಿ ರಾಷ್ಟೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಪರಿವಾರದ ತಂಡವು ಕಾಲ್ನಡಿಗೆ ಜಾಥ ಮತ್ತು ಸೈಕಲ್ ಜಾಥ ಕಾರ್ಯಕ್ರಮವನ್ನು ಆಯೋಜಿಸಿತ್ತು.
• ಕಾರ್ಯಕ್ರಮವನ್ನು ಕೆಂಗೇರಿ ಪೊಲೀಸ್ ಠಾಣೆಯ ಟ್ರಾಫಿಕ್ ಇನ್ಸ್ಪೆಕ್ಟರ್ ರಾಮಚಂದ್ರಪ್ಪ ಹಾಗೂ ಸಬ್ ಇನ್ಸ್ಪೆಕ್ಟರ್ ಶೇಖರ್ ರವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
• ಆದಿತ್ಯ ಬೇಕರಿಯಿಂದ ಕಾರ್ಯಕ್ರಮವು ಪ್ರಾರಂಭವಾಯಿತು.
• ಆರ್ ವಿ ಕೆ ವಿದ್ಯಾರ್ಥಿಗಳು, ಎನ್ ಸಿ ಸಿ ವಿದ್ಯಾರ್ಥಿಗಳು, ಸಿಬ್ಬಂದಿಗಳ ಗುಂಪು, ಮಾತೃಭಾರತಿಯ ಮಾತೆಯರು, ಪೋಷಕರು, ಶಿಕ್ಷಕರು ಜಾಥಾದಲ್ಲಿ ಪರಿಸರ ಉಳಿಸುವ ಬಗ್ಗೆ ಘೋಷಣೆಗಳನ್ನು ಜೋರಾಗಿ ಹೇಳುತ್ತಿದ್ದರು.
• ಜೊತೆಗೆ, ಸಾರ್ವಜನಿಕರಿಗೆ ಪೇಪರ್ ಚೀಲ ಹಾಗೂ ಸೀಡ್ ಬಾಲ್ ಗಳನ್ನು ವಿತರಿಸುತ್ತಿದ್ದರು.
• ಜಯದೇವ್ ಸ್ಮಾರಕ ರಾಷ್ಟೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ರಾಜರಾಜೇಶ್ವರಿನಗರದವರೆಗೆ ನಡೆಯಿತು.
• ಮುಖ್ಯ ಅತಿಥಿಗಳಾಗಿ ರಾಷ್ಟೋತ್ಥಾನ ಆಸ್ಪತ್ರೆಯ ವೈದ್ಯಕೀಯ ಆಡಳಿತಾಧಿಕಾರಿ ಡಾ.ಶೈಲಾ ಎಚ್. ಹಾಗೂ ರಾಷ್ಟ್ರೋತ್ಥಾನ ಆಸ್ಪತ್ರೆಯ ಸಿ ಒ ಒ ಹಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ವಿನಿತ್ ಮೋಹನ್ ರವರು ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
• ಪರಿಸರ ಗೀತೆ, ಮರ ಕಡಿಯುವುದರಿಂದ ಉಂಟಾಗುವ ತೊಂದರೆಗಳ ಕುರಿತಾದ ನಾಟಕ ಮತ್ತು ಯೋಗ ನೃತ್ಯವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
• ಮುಖ್ಯ ಅತಿಥಿಗಳಾದ ರಾಜ್ಯೋತ್ಥಾನ ಆಸ್ಪತ್ರೆಯ ವೈದ್ಯಕೀಯ ಆಡಳಿತಾಧಿಕಾರಿ ಡಾ.ಶೈಲಾ ಎಚ್ ಎನ್ ಅವರು ಪರಿಸರ ಹಾನಿಯಾಗುತ್ತಿದೆ. ಸ್ಟ್ರಾ ಬಳಸುವುದನ್ನು ನಿಲ್ಲಿಸಬೇಕು ಪ್ಲಾಸ್ಟಿಕ್ ಬಳಕೆಯ ನಿಯಂತ್ರಣ ಮಾಡೋಣ. ಗಿಡಗಳನ್ನು ಹೆಚ್ಚು ಹೆಚ್ಚು ನೆಡೋಣ. ಕಸದ ಸರಿಯಾದ ವಿಲೇವಾರಿಯನ್ನು ಮಾಡೋಣ ಎಂದು ಪರಿಸರ ಸಂರಕ್ಷಣೆಯ ಬಗ್ಗೆ ಸಂದೇಶವನ್ನು ನೀಡಿದರು.
• ಡಾ. ವಿನೀತ್ ರವರು ಸೈನಿಕರು, ವೈದ್ಯರು, ಶಿಕ್ಷಕರಂತೆ ಪರಿಸರವನ್ನು ಸಂರಕ್ಷಿಸುವವರು ಸಹ ನಮಗೆ ತುಂಬಾ ಮುಖ್ಯ. ಹಾಗಾಗಿ ನಾವೆಲ್ಲರೂ ಸೇರಿ ಪರಿಸರವನ್ನು ಸಂರಕ್ಷಣೆ ಮಾಡೋಣ ಎಂದು ಎಲ್ಲರನ್ನೂ ಪ್ರೋತ್ಸಾಹಿಸಿದರು.
• ವಿದ್ಯಾರ್ಥಿಗಳ ಅದ್ಬುತ ಪ್ರದರ್ಶನವನ್ನು ಅಭಿನಂದಿಸಿ ಸ್ಮರಣಿಕೆಯನ್ನು ನೀಡಿ ಪುರಸ್ಕರಿಸಲಾಯಿತು.








