Bengaluru, Mar. 27: Sri Ram Navami festival was celebrated under the guidance of Pradhanacharya Smt. Nanda herein Rashtrotthana Vidya Kendra – Banashankari.
*The worship of Rama began with a bhajan.
*The students explained the method of celebrating Ram Navami festival and the importance of the celebration. In Hindu tradition, Sri Rama, the hero of the Ramayana and the king of Ayodhya, is worshipped as an incarnation of Vishnu. The students said that Sri Ram Navami is celebrated on the Shukla Paksha of Chaitra month, eight days after Ugadi.
*The students performed a beautiful dance.
*As part of Ram Navami, Panaka, Buttermilk, Kosambari Prasad were distributed to everyone.
ಬೆಂಗಳೂರು, ಮಾ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಪ್ರಧಾನಾಚಾರ್ಯರಾದ ಶ್ರೀಮತಿ ನಂದ ಅವರ ಮಾರ್ಗದರ್ಶನದಲ್ಲಿ ಶ್ರೀ ರಾಮನವಮಿ ಹಬ್ಬವನ್ನು ಆಚರಿಸಲಾಯಿತು.
*ರಾಮನ ಪೂಜೆಯು ಭಜನೆಯೊಂದಿಗೆ ಪ್ರಾರಂಭವಾಯಿತು.
*ವಿದ್ಯಾರ್ಥಿಗಳು ರಾಮನವಮಿ ಹಬ್ಬವನ್ನು ಆಚರಿಸುವ ವಿಧಾನ ಮತ್ತು ಆಚರಣೆಯ ಮಹತ್ವವನ್ನು ತಿಳಿಸಿ, ಹಿಂದೂ ಸಂಪ್ರದಾಯದಲ್ಲಿ ರಾಮಾಯಣದ ಕಥಾ ನಾಯಕ ಹಾಗೂ ಅಯೋಧ್ಯೆಯ ರಾಜನಾದ ಶ್ರೀರಾಮನನ್ನು ವಿಷ್ಣುವಿನ ಅವತಾರವಾಗಿ ಪೂಜಿಸಲಾಗುತ್ತದೆ. ಶ್ರೀ ರಾಮನವಮಿ ಯುಗಾದಿಯ ಎಂಟು ದಿನಗಳ ನಂತರ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಆಚರಿಸಲಾಗುತ್ತದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
*ವಿದ್ಯಾರ್ಥಿಗಳು ಸುಂದರವಾಗಿ ನೃತ್ಯವನ್ನು ಪ್ರದರ್ಶಿಸಿದರು.
*ರಾಮನವಮಿಯ ಅಂಗವಾಗಿ ಎಲ್ಲರಿಗೂ ಪಾನಕ, ಮಜ್ಜಿಗೆ, ಕೋಸಂಬರಿ ಪ್ರಸಾದವನ್ನು ವಿತರಿಸಲಾಯಿತು.






