Bengaluru, Apr. 6-10: A summer camp was organized for the children of the school’s support staff herein Rashtrotthana Vidya Kendra – Banashankari. The camp was inaugurated on 6.4.2026 with the lighting of the lamp under the leadership of the school’s Principal, Smt. Nanda. Various activities were conducted in the camp on arts and crafts, sports, computer education, and culture and tradition. A total of 35 students participated in this camp and benefited. The students shared their experiences at the closing ceremony held on 10.4.2026. At the end of the program, small gifts were given to all the students.

ಬೆಂಗಳೂರು, ಏ. 6-10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಶಾಲೆಯ ಸಹಾಯಕ ಸಿಬ್ಬಂದಿ ವರ್ಗದವರ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿತ್ತು. 6.4.2026ರಂದು ಶಾಲೆಯ ಪ್ರಧಾನಾಚಾರ್ಯರಾದ ಶ್ರೀಮತಿ ನಂದ ಅವರ ನೇತೃತ್ವದಲ್ಲಿ ದೀಪ ಪ್ರಜ್ವಲನೆಯೊಂದಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ಶಿಬಿರದಲ್ಲಿ ಕಲೆ ಮತ್ತು ಕರಕುಶಲ, ಕ್ರೀಡೆ, ಕಂಪ್ಯೂಟರ್ ಶಿಕ್ಷಣ, ಹಾಗೂ ಸಂಸ್ಕಾರ ಮತ್ತು ಸಂಸ್ಕೃತಿ ಕುರಿತು ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ಒಟ್ಟು 35 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು. 10.4.2026ರಂದು ನಡೆದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಕಿರು ಕಾಣಿಕೆಗಳನ್ನು ನೀಡಲಾಯಿತು.