Swadeshi Day in RVK – Banashankari

“Motherhood is a feeling that transcends country, language and borders” – Sri Vasanth Kumar
Bengaluru, Sept 28: Swadeshi Day was celebrated by the Matru Bharati team herein Rashtrotthana Vidya Kendra – Banashankari.The program started with the lighting of the lamp and garlanding of Ahalyabhai Holkar’s portrait. Sri Vasanth Kumar, Correspondent of the school, appreciated the program conducted by the Matrubharati team. Motherhood is a feeling that transcends country, language and borders. He wished that more programs like this would come from the Matru Bharati team.As part of Swadeshi Day, mothers presented their views on various topics.Smt. Sharanya, Smt. Anupama, Smt. Mangala Meitri, Smt. Sitara respectively presented their views on Swadeshi, Ayurveda – healthy lifestyle, self-language, Swadeshi dress.Next, a quiz program was organized for the mothers to cover Swadeshi issues. The mothers who answered the questions were given a book on Ahalyabai Holkar as a small gift and Smt. Vandana Shastri shared a short information about how we can remember Ahalyabai even there when the issue of Swadeshi comes up. Later the mothers took a pledge to use indigenous materials. Some desi games were played for the mothers.An exhibition of some indigenous items was arranged. 35 mothers participated in this program.

“ಮಾತೃತ್ವ ಎನ್ನುವುದು ನಾಡು, ನುಡಿ, ಗಡಿ ಎಲ್ಲವನ್ನು ಮೀರಿದ ಒಂದು ಭಾವನೆ” – ಶ್ರೀ ವಸಂತ್ ಕುಮಾರ್ – ಸ್ವದೇಶೀ ದಿನ
ಬೆಂಗಳೂರು, ಸಪ್ಟೆಂಬರ್ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಬನಶಂಕರಿಯಲ್ಲಿ ಮಾತೃಭಾರತೀ ತಂಡದವರಿಂದ ಸ್ವದೇಶೀ ದಿನವನ್ನು ಆಚರಿಸಲಾಯಿತು.ದೀಪ ಪ್ರಜ್ವಲನೆ ಮತ್ತು ಅಹಲ್ಯಾಭಾಯಿ ಹೋಳ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಶಾಲೆಯ ಬಾತ್ಮೀದಾರರಾದ ಶ್ರೀ ವಸಂತ್ ಕುಮಾರ್ ಅವರು ಮಾತೃಭಾರತಿ ತಂಡದಿಂದ ನಡೆಸುತ್ತಿರುವ ಕಾರ್ಯಕ್ರಮವನ್ನು ಶ್ಲಾಘಿಸಿದರು. ಮಾತೃತ್ವ ಎನ್ನುವುದು ನಾಡು, ನುಡಿ, ಗಡಿ ಎಲ್ಲವನ್ನು ಮೀರಿದ ಒಂದು ಭಾವನೆ. ಮಾತೃಭಾರತಿ ತಂಡದಿಂದ ಇನ್ನು ಹೆಚ್ಚಿನ ಕಾರ್ಯಕ್ರಮಗಳು ಹೀಗೆ ಮೂಡಿ ಬರಲಿ ಎಂದು ಹಾರೈಸಿದರು.ಸ್ವದೇಶೀ ದಿನದ ಅಂಗವಾಗಿ ಮಾತೆಯರು ವಿವಿಧ ವಿಷಯಗಳ ಮೇಲೆ ತಮ್ಮ ವಿಚಾರವನ್ನು ಮಂಡಿಸಿದರು.ಸ್ವದೇಶೀ, ಆಯುರ್ವೇದ, ಆರೋಗ್ಯಕರ ಜೀವನ ಪದ್ಧತಿ, ಸ್ವ-ಭಾಷೆ, ಸ್ವದೇಶೀ ಉಡುಗೆ – ತೊಡುಗೆ ಎಂಬ ವಿಚಾರಗಳ ಕುರಿತಂತೆ ಕ್ರಮವಾಗಿ ಶ್ರೀಮತಿ ಶರಣ್ಯ, ಶ್ರೀಮತಿ ಅನುಪಮಾ, ಶ್ರೀಮತಿ ಮಂಗಳ ಮೇತ್ರಿ, ಶ್ರೀಮತಿ ಸಿತಾರಾ ಅವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಮುಂದೆ ಸ್ವದೇಶೀ ವಿಚಾರಗಳನ್ನು ಒಳಗೊಂಡಿರುವಂತೆ ರಸಪ್ರಶ್ನೆ ಕಾರ್ಯಕ್ರಮವನ್ನು ಮಾತೆಯರಿಗೆ ಆಯೋಜಿಸಲಾಗಿತ್ತು. ಪ್ರಶ್ನೆಗಳಿಗೆ ಉತ್ತರಿಸಿದ ಮಾತೆಯರಿಗೆ ಅಹಲ್ಯಾಬಾಯಿ ಹೋಳ್ಕರ್ ಅವರ ವಿಚಾರವನ್ನು ಒಳಗೊಂಡ ಪುಸ್ತಕವನ್ನು ಕಿರು ಕಾಣಿಕೆಯಾಗಿ ನೀಡಲಾಯಿತು ಮತ್ತು ಸ್ವದೇಶೀ ಎಂಬ ವಿಚಾರ ಬಂದಾಗ ಅಲ್ಲಿಯೂ ಅಹಲ್ಯಾಬಾಯಿ ಅವರನ್ನು ನಾವು ಹೇಗೆ ಸ್ಮರಿಸಿಕೊಳ್ಳಬಹುದು ಎಂಬ ಬಗ್ಗೆ ಕಿರು ಮಾಹಿತಿಯನ್ನು ಶ್ರೀಮತಿ ವಂದನಾ ಶಾಸ್ತ್ರಿಯವರು ಹಂಚಿಕೊಂಡರು. ನಂತರದಲ್ಲಿ ಸ್ವದೇಶೀ ವಸ್ತುಗಳನ್ನು ಬಳಸುವುದರ ಕುರಿತಾಗಿ ಮಾತೆಯರು ಪ್ರತಿಜ್ಞಾ ಸ್ವೀಕಾರವನ್ನು ಮಾಡಿದರು. ಮಾತೆಯರಿಗೆ ಕೆಲವು ದೇಸಿ ಆಟಗಳನ್ನು ಆಡಿಸಲಾಯಿತು.ಕೆಲವು ಸ್ವದೇಶೀ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. 35 ಜನ ಮಾತೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Scroll to Top