Bengaluru, Sep. 5: Teachers’ Day was celebrated at Rashtrotthana Vidya Kendra – Banashankari.

  • Students of class 10 was talking about Sarvepalli Radhakrishnan in various prayer meetings.
  • Then the children sang a group song melodiously.
  • Students of class 10 did a group dance.
  • Students of class 10 played the role of teachers for four periods and learned about the hard work, discipline and performance of teachers.

Afternoon session:

  • Sri Dinesh Hegde, Secretary of Rashtrotthana Parishath, Dr. Pratosh A.P., Assistant Professor in the Department of Electronics and Communication at the Indian Institute of Science, Bengaluru, and Sri Vasanth Kumar, Correspondent of Rashtrotthana CBSC Schools in the South Zone, were present at the program.
  • Sri Jayasimha sang a melodious personal song.
  • Sri Dinesh Hegde said that everyone should always remember the two gurus, Surya and Guru, who taught them. Without Surya, there is no world; without Guru, there is no life. With a couple of incidents, they told how Guru is important for children. They explained how character is built by a teacher.
  • The teachers sang a group song.
  • The teachers and the office staff performed a dance.
  • The Gokulam teachers danced to a folk song.
  • The guests gifted the teachers with a book.
  • The teachers shared their experience.
  • Teachers who have completed ten years of experience were congratulated.
  • The Chief Guest said that in the history of our country, the relationship between Guru and Shishya in Gurukul was in the form of dialogue. We should also adopt it. We should create an environment where children come to school happily. They should not come forcibly. Teachers should instil several skills. Information is available everywhere. Children should not be prepared just for exams. Critical and creative qualities should be developed in them.

 

ಬೆಂಗಳೂರು, ಸೆ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. 

  • ಹತ್ತನೆಯ ತರಗತಿಯ ವಿದ್ಯಾರ್ಥಿಗಳು ವಿವಿಧ ಪ್ರಾರ್ಥನಾ ಸಭೆಗಳಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ರವರ ಬಗ್ಗೆ ತಿಳಿಸಿದರು. 
  • ನಂತರ ಮಕ್ಕಳು ಸಮೂಹ ಗಾಯನವನ್ನು ಸುಮಧುರವಾಗಿ ಹಾಡಿದರು. 
  • 10ನೇ ತರಗತಿಯ ವಿದ್ಯಾರ್ಥಿಗಳು ಸಮೂಹ ನೃತ್ಯವನ್ನು ಮಾಡಿದರು. 
  • 10ನೇ ತರಗತಿಯ ಮಕ್ಕಳು ನಾಲ್ಕು ಅವಧಿ ಶಿಕ್ಷಕರಾಗಿ ಪಾತ್ರ ನಿರ್ವಹಿಸಿ ಶಿಕ್ಷಕರ ಶ್ರಮ, ಶಿಸ್ತು, ಹಾಗೂ ಅವರ ಕರ್ತವ್ಯ ನಿರ್ವಹಣೆಯ ಬಗ್ಗೆ ತಿಳಿದುಕೊಂಡರು.

ಮಧ್ಯಾಹ್ನದ ಅಧಿವೇಶನ:

  • ಕಾರ್ಯಕ್ರಮಕ್ಕೆ ರಾಷ್ಟ್ರೋತ್ಥಾನ ಪರಿಷತ್ತಿನ ಕಾರ್ಯದರ್ಶಿಯಾಗಿರುವ ಶ್ರೀ ದಿನೇಶ್ ಹೆಗ್ಡೆಯವರು, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ. ಪ್ರತೋಷ್ ಎ.ಪಿ. ಯವರು, ದಕ್ಷಿಣ ವಲಯದ ರಾಷ್ಟ್ರೋತ್ಥಾನ ಸಿಬಿಎಸ್ಸಿ ಶಾಲೆಗಳ ಕರೆಸ್ಪಾಂಡೆಂಟ್ಆದ ಶ್ರೀ ವಸಂತ್ ಕುಮಾರ್ ಅವರುಗಳು ಆಗಮಿಸಿದ್ದರು. 
  • ಶ್ರೀ ಜಯಸಿಂಹ ಅವರು ಸುಮಧುರವಾಗಿ ವೈಯಕ್ತಿಕ ಗೀತೆಯನ್ನು ಹಾಡಿದರು.
  • ಶ್ರೀ ದಿನೇಶ್ ಹೆಗಡೆ ಅವರು ಎಲ್ಲರೂ ಇಬ್ಬರು ಗುರುಗಳಾದ ಸೂರ್ಯ ಹಾಗೂ ವಿದ್ಯೆ ಕಲಿಸಿದ ಗುರುಗಳನ್ನು ಯಾವಾಗಲೂ ಸ್ಮರಿಸಬೇಕು. ಸೂರ್ಯನಿಲ್ಲದೇ ಜಗತ್ತಿಲ್ಲ, ಗುರುವಿಲ್ಲದೇ ಬದುಕಿಲ್ಲ. ಗುರು ಮಕ್ಕಳಿಗೆ ಹೇಗೆ ಮುಖ್ಯ ಎಂದು ಒಂದೆರಡು ಘಟನೆಗಳಲ್ಲಿ ತಿಳಿಸಿದರು. ಶಿಕ್ಷಕನಿಂದ ಹೇಗೆ ವ್ಯಕ್ತಿ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
  • ಶಿಕ್ಷಕರು ಸಮೂಹ ಗಾಯನವನ್ನು ಹಾಡಿದರು.
  • ಶಿಕ್ಷಕರು ಹಾಗೂ ಕಚೇರಿ ಸಿಬ್ಬಂದಿಯವರು ನೃತ್ಯವನ್ನು ಮಾಡಿದರು. 
  • ಗೋಕುಲಂ ಶಿಕ್ಷಕರು ಜಾನಪದ ಹಾಡಿಗೆ ಹೆಜ್ಜೆ ಹಾಕಿದರು. 
  • ಶಿಕ್ಷಕರಿಗೆ ಅತಿಥಿಗಳು ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. 
  • ಶಿಕ್ಷಕರು ತಮ್ಮ ಅನುಭವವನ್ನು ಹಂಚಿಕೊಂಡರು. 
  • ಹತ್ತು ವರ್ಷ ಅನುಭವ ಪಡೆದ ಶಿಕ್ಷಕರನ್ನು ಅಭಿನಂದಿಸಲಾಯಿತು. 
  • ಮುಖ್ಯ ಅತಿಥಿಗಳು ನಮ್ಮ ದೇಶದ ಇತಿಹಾಸದಲ್ಲಿ ಗುರುಕುಲದಲ್ಲಿ ಗುರು ಶಿಷ್ಯರ ಸಂಬಂಧ ಸಂವಾದದ ರೂಪದಲ್ಲಿ ಇತ್ತು. ನಾವು ಸಹ ಅದನ್ನು ರೂಢಿಸಿಕೊಳ್ಳಬೇಕು. ಮಕ್ಕಳು ಶಾಲೆಗೆ ಸಂತೋಷದಿಂದ ಬರುವ ವಾತಾವರಣವನ್ನು ಕಲ್ಪಿಸಿ ಕೊಡಬೇಕು. ಅವರು ಬಲವಂತವಾಗಿ ಬರಬಾರದು. ಶಿಕ್ಷಕರು ಹಲವಾರು ಕೌಶಲ್ಯಗಳನ್ನು ರೂಡಿಸಿಕೊಳ್ಳಬೇಕು. ಮಾಹಿತಿ ಎಲ್ಲಾ ಕಡೆಯೂ ಸಿಗುತ್ತದೆ. ಕೇವಲ ಪರೀಕ್ಷೆಗಾಗಿ ಮಕ್ಕಳನ್ನು ತಯಾರಿಸುವುದು ಬೇಡ. ಅವರಲ್ಲಿ ವಿಮರ್ಶಾತ್ಮಕ, ಸೃಜನಶೀಲತೆಯ ಗುಣವನ್ನು ಬೆಳೆಸಬೇಕು ಎಂದು ತಿಳಿಸಿದರು.