Teacher’s Day in RVK – Banashankari

Bengaluru, Sept 5: Teacher’s Day was celebrated herein Rashtrotthana Vidya Kendra – Banashankari. Floral tributes paid to portrait of Dr. S. Radhakrishnan. In recognition of Sarvepalli Radhakrishnan’s significant contributions to education, his birthday is commemorated as Teacher’s Day, thus students highlighting the importance of the celebration.Class X students played the role of teachers and taught the younger children that day.In the evening, a special program was arranged for the teachers by Banashankari and Somanahalli Vidya Kendras. Actor and Director, Sri Suchendraprasad graced the ceremony.The teacher sang a personal song. The dance teachers performed their beautiful dance. Music teachers performed Jugalbandi concert. Teachers of Gokulam danced well. The teachers of Somanahalli School sang a group song. Smt. Purnima taught the Pledge to the teachers. The chief guest honoured all the teachers by giving them a book. A few selected teachers shared their professional experience.

ಬೆಂಗಳೂರು, ಸಪ್ಟೆಂಬರ್ 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಬನಶಂಕರಿಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಡಾ. ಎಸ್. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.ಸರ್ವೇಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಇವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದು ಮಕ್ಕಳು ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಮಹತ್ವವನ್ನು ತಿಳಿಸಿದರು. ನಂತರ ಸುಮಧುರವಾದ ಸಂಗೀತದ ಮೂಲಕ, ನೃತ್ಯದ ಮೂಲಕ ಶಿಕ್ಷಕರನ್ನು ರಂಜಿಸಿದರು.ಹತ್ತನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರ ಪಾತ್ರವನ್ನು ನಿರ್ವಹಿಸುತ್ತ, ಕಿರಿಯ ಮಕ್ಕಳಿಗೆ ಆ ದಿನ ಪಾಠವನ್ನು ಮಾಡಿದರು.ಸಂಜೆ ಶಿಕ್ಷಕರಿಗಾಗಿ ಬನಶಂಕರಿ ಮತ್ತು ಸೋಮನಹಳ್ಳಿ ವಿದ್ಯಾಕೇಂದ್ರದಿಂದ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನಟ, ನಿರ್ದೇಶಕರಾದ ಶ್ರೀ ಸುಚೇಂದ್ರಪ್ರಸಾದ್ ಅವರು ಆಗಮಿಸಿದ್ದರು. ಶಿಕ್ಷಕರು, ವೈಯಕ್ತಿಕ ಗೀತೆಯನ್ನು ಹಾಡಿದರು. ನೃತ್ಯ ಶಿಕ್ಷಕರು ತಮ್ಮ ಸುಂದರವಾದ ನೃತ್ಯವನ್ನು ಪ್ರದರ್ಶಿಸಿದರು. ಸಂಗೀತ ಶಿಕ್ಷಕರು ಜುಗಲ್ಬಂದಿ ಕಛೇರಿ ಮಾಡಿದರು. ಗೋಕುಲಂ ವಿಭಾಗದ ಶಿಕ್ಷಕರು ನರ್ತಿಸಿದರು. ಸೋಮನಹಳ್ಳಿ ಶಾಲೆಯ ಶಿಕ್ಷಕರು ಸಮೂಹ ಗೀತೆ ಹಾಡಿದರು. ಶ್ರೀಮತಿ ಪೂರ್ಣಿಮಾ ಶಿಕ್ಷಕರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಮುಖ್ಯ ಅತಿಥಿಗಳು ಪುಸ್ತಕವನ್ನು ನೀಡುವ ಮೂಲಕ ಎಲ್ಲಾ ಶಿಕ್ಷಕರನ್ನು ಗೌರವಿಸಿದರು. ಆಯ್ದ ಕೆಲವು ಶಿಕ್ಷಕರು ತಮ್ಮ ವೃತ್ತಿ ಜೀವನದ ಅನುಭವವನ್ನು ಹಂಚಿಕೊಂಡರು.

Scroll to Top