Bengaluru, Aug. 12: A unique artistic celebration called “Kala Kutir” was organised in the Gokulam section of Rashtrotthana Vidya Kendra – Banashankari.
- The Chatuvatika room was decorated with beautiful rangoli, flower decorations and various artworks.
- As part of the program, Puri Jagannath Rath Yatra, artworks introducing the importance and benefits of yoga, beautiful cow artwork (Gadwal art), exhibition of various textile artworks, paintings and musical instruments were organised.
- The pictures of various instruments installed on the selfie stand especially attracted the children. The diverse handicrafts were appreciated.
- Children of all classes displayed various handicrafts made using their creativity and imagination in front of the classrooms.
- The children celebrated by looking at each other’s artworks.
- The artworks in the exhibition were given as gifts to the children.
- An invitational program was held by the children in the auditorium.
- PKG, LKG and UKG children sang a folk song together beautifully, introducing the beauty of the folk culture of our country.
- UKG children gave a yoga performance.
- A colourful ramp walks with puppetry by Smt. Sudha, mridangam playing by an LKG child, and a dance composition by LKG children added charm to the program.
ಬೆಂಗಳೂರು, ಆ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಗೋಕುಲಂ ವಿಭಾಗದಲ್ಲಿ “ಕಲಾ ಕುಟೀರ” ಎಂಬ ವಿನೂತನ ಕಲಾತ್ಮಕ ಸಂಭ್ರಮಾಚರಣೆಯನ್ನು ಆಯೋಜಿಸಲಾಯಿತು.
- ಚಟುವಟಿಕಾ ಕೊಠಡಿಯನ್ನು ಸುಂದರ ರಂಗೋಲಿ, ಹೂವಿನ ಅಲಂಕಾರ ಹಾಗೂ ವೈವಿಧ್ಯಮಯ ಕಲಾಕೃತಿಗಳಿಂದ ಸಿಂಗರಿಸಲಾಗಿತ್ತು.
- ಕಾರ್ಯಕ್ರಮದ ಅಂಗವಾಗಿ ಪುರಿ ಜಗನ್ನಾಥರ ರಥಯಾತ್ರೆ, ಯೋಗದ ಮಹತ್ವ ಮತ್ತು ಪ್ರಯೋಜನಗಳನ್ನು ಪರಿಚಯಿಸುವ ಕಲಾಕೃತಿಗಳು, ಸುಂದರವಾದ ಹಸುವಿನ ಕಲಾಕೃತಿ (ಗದ್ವಾಲ್ ಕಲೆ), ವಿವಿಧ ಜವಳಿ ಕಲಾಕೃತಿಗಳ ಪ್ರದರ್ಶನ, ಚಿತ್ರಕಲೆಗಳು ಹಾಗೂ ಸಂಗೀತ ವಾದ್ಯಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
- ಸೆಲ್ಫಿ ಸ್ಟ್ಯಾಂಡ್‌ನಲ್ಲಿ ಅಳವಡಿಸಲಾಗಿದ್ದ ವಿವಿಧ ವಾದ್ಯಗಳ ಚಿತ್ರಗಳು ಮಕ್ಕಳನ್ನು ವಿಶೇಷವಾಗಿ ಆಕರ್ಷಿಸಿದವು. ವೈವಿಧ್ಯಮಯ ಕರಕುಶಲ ಕಲಾಕೃತಿಗಳು ಮೆಚ್ಚುಗೆಗೆ ಪಾತ್ರವಾದವು.
- ಎಲ್ಲಾ ತರಗತಿಗಳ ಮಕ್ಕಳು ತಮ್ಮ ಸೃಜನಶೀಲತೆ ಹಾಗೂ ಕಲ್ಪನಾಶಕ್ತಿಯನ್ನು ಬಳಸಿ ತಯಾರಿಸಿದ ವಿವಿಧ ಕರಕುಶಲ ಕಲಾಕೃತಿಗಳನ್ನು ತರಗತಿಗಳ ಮುಂಭಾಗದಲ್ಲಿ ಪ್ರದರ್ಶಿಸಿದ್ದರು.
- ಮಕ್ಕಳು ಪರಸ್ಪರರ ಕಲಾಕೃತಿಗಳನ್ನು ವೀಕ್ಷಿಸಿ ಸಂಭ್ರಮಿಸಿದರು.
- ಪ್ರದರ್ಶನದಲ್ಲಿದ್ದ ಕಲಾಕೃತಿಗಳನ್ನು ಮಕ್ಕಳಿಗೆ ಉಡುಗೊರೆಯಾಗಿ ನೀಡಲಾಯಿತು.
- ಆಡಿಟೋರಿಯಂನಲ್ಲಿ ಮಕ್ಕಳಿಂದ ಆಮಂತ್ರಣ ಕಾರ್ಯಕ್ರಮ ನೆರವೇರಿತು.
- PKG, LKG ಹಾಗೂ UKG ಮಕ್ಕಳು ಒಟ್ಟಾಗಿ ಜನಪದ ಗೀತೆಯನ್ನು ಸುಂದರವಾಗಿ ಹಾಡಿ, ನಮ್ಮ ನಾಡಿನ ಜನಪದ ಸಂಸ್ಕೃತಿಯ ಸೊಗಡನ್ನು ಪರಿಚಯಿಸಿದರು.
- UKG ಮಕ್ಕಳು ಯೋಗ ಪ್ರದರ್ಶನವನ್ನು ನೀಡಿದರು.
- ಶ್ರೀಮತಿ ಸುಧಾ ಅವರಿಂದ ಗೊಂಬೆಯಾಟ, LKG ಮಗುವಿನ ಮೃದಂಗ ವಾದನ, ಹಾಗೂ LKG ಮಕ್ಕಳ ನೃತ್ಯ ಸಂಯೋಜನೆಯೊಂದಿಗೆ ನಡೆದ ವರ್ಣರಂಜಿತ ರ‍್ಯಾಂಪ್ ವಾಕ್ ಕಾರ್ಯಕ್ರಮಕ್ಕೆ ಮೆರುಗು ತಂದವು.









