Bengaluru, June 5: World Environment Day was celebrated herein Rashtrotthana Vidya Kendra – Banashankari.Principal Smt. Nanda and Vice Principal Smt. Sandhya inaugurated the program by planting and watering trees.“World Environment Day is celebrated every year on June 5. It was first celebrated in 1973 under the principle of One Earth. There is no other planet that can replace Earth. Therefore, protecting the environment should be our first priority. Earth is not yours, not mine, it is ours,” said selected children, explaining the importance of Environment Day.Then the students sang a song related to the environment melodiously.
ಬೆಂಗಳೂರು, ಜೂ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಪ್ರಧಾನಾಚಾರ್ಯರಾದ ಶ್ರೀಮತಿ ನಂದ ಅವರು, ಉಪ ಪ್ರಧಾನಾಚಾರ್ಯರಾದ ಶ್ರೀಮತಿ ಸಂಧ್ಯಾ ಅವರು ಗಿಡ ನೆಟ್ಟು, ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
“ವಿಶ್ವ ಪರಿಸರ ದಿನಾಚರಣೆಯನ್ನು ಪ್ರತಿವರ್ಷ ಜೂನ್ 5 ರಂದು ಆಚರಿಸಲಾಗುತ್ತದೆ. ಇದನ್ನು 1973 ರಲ್ಲಿ ಒಂದೇ ಭೂಮಿ ಎಂಬ ತತ್ವದಡಿ ಮೊದಲ ಬಾರಿ ಆಚರಿಸಲಾಯಿತು. ಭೂಮಿಗೆ ಪರ್ಯಾಯವಾಗಿ ಬೇರೆ ಯಾವುದೇ ಗ್ರಹವೂ ಇಲ್ಲ. ಆದ್ದರಿಂದ ಪರಿಸರವನ್ನು ಕಾಪಾಡುವುದು ನಮ್ಮ ಪ್ರಥಮ ಆದ್ಯತೆಯಾಗಬೇಕು. ಭೂಮಿ ನಿನ್ನದಲ್ಲ, ನನ್ನದಲ್ಲ, ನಮ್ಮದು” ಎಂದು ಪರಿಸರ ದಿನಾಚರಣೆಯ ಮಹತ್ವವನ್ನು ಆಯ್ದ ಮಕ್ಕಳು ತಿಳಿಸಿದರು. ನಂತರ ಪರಿಸರಕ್ಕೆ ಸಂಬಂಧಿಸಿದ ಗೀತೆಯನ್ನು ವಿದ್ಯಾರ್ಥಿಗಳು ಸುಮಧುರವಾಗಿ ಹಾಡಿದರು.